ಆವರ್ತ- ಮಂಥನ ಪ್ರತಿಕ್ರಿಯೆ / Feedback

’ಆವರ್ತ-ಮಂಥನ’ ಎನ್ನುವ ಕೃತಿ ’ಆವರ್ತ’ ಕಾದಂಬರಿ ಮೂರನೇ ಮುದ್ರಣವಾಗಿ ಹೊರಬರುವ ಹೊತ್ತಿಗೆ ಬಂದಿರುವುದು ಕನ್ನಡ ಜನಮಾನಸದಲ್ಲಿ ’ಆವರ್ತ’ ಎಂತಹ ಭಾವನೆಯನ್ನು ಮೂಡಿಸಿದೆ ಎನ್ನುವ ದಾಖಲೆಯನ್ನು ನಮಗೆ ನೀಡಿದೆ. ಇಳಾ ಸಂಸ್ಥೆಯ ವಿಜಯಾ ಅವರು ’ಪರ್ವ’ ಕಾದಂಬರಿಯ ಬಗೆಗೆ ಅಭಿಪ್ರಾಯಗಳನ್ನು ಸಂಗ್ರಹಿಸಿ, ಪುಸ್ತಕ ರೂಪದಲ್ಲಿ ಹೊರತರಲು ಸುಮಾರು ಕಾಲ ತೆಗೆದುಕೊಂಡರು. ಆದರೆ ಆಶಾ ರಘು ಅವರ ’ಆವರ್ತ’ ಕಾದಂಬರಿಯ ಬಗೆಗೆ ಇಂತಹ ಒಂದು ಪುಸ್ತಕ ಬಹಳ ಬೇಗ ಬಂದಿದೆ. ಇದು ಜನರು ಇವರ ಕೃತಿಗೆ ಕೊಟ್ಟಿರುವ ಮಾನ್ಯತೆಗೆ ಸಾಕ್ಷಿಯಾಗಿದೆ.
ಡಾ.ಎಚ್.ಎಸ್.ಸತ್ಯನಾರಾಯಣ