
‘ನೂತನ ಜಗದಾ ಬಾಗಿಲು’ ಸಂಕಲನದಲ್ಲಿ ಐವತ್ತೆಂಟು ಕಥೆಗಾರರ ಕಥೆಗಳಿವೆ ಎಂದು ತಿಳಿದು ಬಹಳ ಸಂತೋಷವಾಯಿತು. ಪ್ರಸ್ತುತ ಕಾಲಘಟ್ಟದಲ್ಲಿ ಹೆಚ್ಚುಹೆಚ್ಚು ಸಂಖ್ಯೆಯಲ್ಲಿ ಲೇಖಕರು ಬರೆಯುತ್ತಿದ್ದಾರೆ. ಹಲವಾರು ಕೃತಿಗಳು ಮರುಮುದ್ರಣಗೊಳ್ಳುತ್ತಲಿವೆ. ಇದು ನಿಜಕ್ಕೂ ಸಾಹಿತ್ಯದ ಸುವರ್ಣ ಯುಗ ಅನ್ನಿಸುತ್ತದೆ.
ಶ್ರೀನಿವಾಸ ಪ್ರಭು
***
ಐವತ್ತೆಂಟು ಕಥೆಗಾರರ ಈ ಸಂಕಲನ ಭರವಸೆಯನ್ನು ಹುಟ್ಟಿಸುತ್ತದೆ. ಕನ್ನಡದಲ್ಲಿ ಇಷ್ಟರ ಮಟ್ಟಿಗೆ ಹೊಸಹೊಸ ಬರಹಗಾರರು ಬರೆಯುತ್ತಿದ್ದಾರೆ ಎಂದರೆ, ಕನ್ನಡಕ್ಕೆ ಇನ್ನು ಸಾವಿರಾರು ವರ್ಷಗಳು ಕಳೆದರೂ ಸಾವಿಲ್ಲ. ಈ ಸಂಕಲನ ವಿಭಿನ್ನ ವಿಚಾರಗಳ ಹಲವಾರು ಕಥೆಗಳನ್ನು ಒಟ್ಟಿಗೆ ಓದುವ ಅವಕಾಶ ಮಾಡಿಕೊಡುತ್ತದೆ. ಸಂಕಲನದ ‘ಹೊಂಗಿರಣ’ ಎಂಬ ಕಥೆ ಎಲ್ಲ ಕಥೆಗಳ ಜೀವಾಳವನ್ನು ಹಿಡಿದಿಡುವ ಕಥೆಯಾಗಿದೆ.
ಸುಮಾ ಸತೀಶ್