
ಜಾನಪದ, ಸಾಂಸಾರಿಕ, ಪೌರಾಣಿಕ ವಸ್ತುಗಳನ್ನಾಯ್ದು ಅದಕ್ಕೆ ಮಕ್ಕಳ ಭಾಷೆಯ, ನವುರಾದ ಹಾಸ್ಯದ ಲೇಪನಕೊಟ್ಟು ಮಿರುಮಿರುಗುವಂತೆ ಮಾಡುವ ಕೌಶಲ್ಯವನ್ನು ಶ್ರೀಮತಿ ಆಶಾರಘು ಅವರು ಹೊಂದಿದ್ದಾರೆ. ಭಾಷೆಯ ಮೇಲಿನ ಹಿಡಿತ, ರಂಗತಂತ್ರಗಳ ಬಳಕೆ, ಕಾಲ್ಪನಿಕತೆಯನ್ನು ಮಕ್ಕಳ ಮಟ್ಟಕ್ಕೆ ಹೊಂದುವAತೆ ದುಡಿಯಿಸಿಕೊಳ್ಳುವಿಕೆ, ರಂಗ್ರಕ್ರಿಯೆಗೆ ಅವಕಾಶ ನಿರ್ಮಿಸುವಿಕೆ ಇತ್ಯಾದಿ ಕಾರಣಗಳಿಂದಾಗಿ ‘ಬಂಗಾರದ ಪಂಜರ ಮತ್ತು ಇತರ ನಾಟಕಗಳು’ ಸಂಕಲನ ಯಶಸ್ಸಿನೆಡೆಗೆ ಸಾಗದಿರುವುದಕ್ಕೆ ಕಾರಣಗಳಿಲ್ಲ ಎಂಬುದು ನನ್ನ ಅಚಲ ನಂಬಿಕೆ.
ಡಾ.ನಾ.ದಾಮೋದರ ಶೆಟ್ಟಿ