ವಸ್ತು/Subject

ಆರನೇ ಬೆರಳು, ಅಗ್ನಿದಿವ್ಯ, ಪುಷ್ಪಗಂಧಿ, ಕಮರಿದ ಕನಸು, ಒಂದು ಮುಂಜಾವಿನಲಿ… ಮೊದಲಾದ ಸುಮಾರು 1997ರಿಂದ 2019ರ ಅವಧಿಯವರೆಗೆ ಲೇಖಕಿಯು ರಚಿಸಿದ ಇಪ್ಪತ್ತು ಕಥೆಗಳು ಈ ಸಂಕಲನದಲ್ಲಿದೆ. ಕೃತಿಯ ಅರಿಕೆಯ ಭಾಗದಲ್ಲಿ ಲೇಖಕಿಯು ತಾವು ಕಥೆಗಳನ್ನು ಬರೆಯಲು ದೇವನೂರು ಮಹಾದೇವರ ಕಥೆಗಳೇ ಪ್ರೇರಣೆ ನೀಡಿದವೆಂದು ಹೇಳಿಕೊಂಡಿದ್ದಾರೆ. ಇಲ್ಲಿ ಪೌರಾಣಿಕ, ಸಾಮಾಜಿಕ, ಕಾಲ್ಪನಿಕ ಮೊದಲಾದ ಎಲ್ಲ ಬಗೆಯ ಕಥೆಗಳನ್ನು ಕಾಣಬಹುದು. ಇಲ್ಲಿನ ಕೆಲವು ಕಥೆಗಳು ಮಲ್ಲಿಗೆ, ಪ್ರಜಾಮತ, ಕರುನಾಡ ಸಂಜೆ, ಸೌಂದರ್ಯ, ಮಯೂರ, ಕರ್ಮವೀರ, ಹೊಸದಿಗಂತ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.