ವಸ್ತು/Subject

’ಕೆಂಪು ದಾಸವಾಳ’ ಎಂಬ ವಿಶೇಷ ಹೆಸರಿನ ಈ ಕಥಾಸಂಕಲನದಲ್ಲಿ ಅಷ್ಟೇ ವಿಶೇಷವಾದ ಕತೆಗಳಿವೆ. ಬದುಕು, ಸಾವು, ಸೂತಕ, ಮಿಲನ, ಸಂಪ್ರದಾಯ, ಸಂಪ್ರದಾಯ ಆಧುನಿಕತೆಯ ಮುಖಾಮುಖಿ ಮತ್ತು ತಿಕ್ಕಾಟ, ಹುಡುಕಾಟ ಮುನ್ನೆಲೆಯ ಕತೆಗಳಿವೆ. ಮನುಷ್ಯನನ್ನು ಅಂತರಂಗದಿಂದ ಹೊಸ ಕಾಣ್ಕೆಯನ್ನು ನೋಡುವ ರೀತಿಯನ್ನು ಬದಲಾಯಿಸುವ ತೀವ್ರ ಸಂಗತಿಗಳೆಂದರೆ ಸಾವು ಮತ್ತು ಕಾಮ. ಅದು ಈ ಕಥಾಸಂಕಲನದಲ್ಲಿ ದಟ್ಟವಾಗಿಯೂ ಗಾಢವಾಗಿಯೂ ಕೂಡಿದ್ದು ಮತ್ತಷ್ಟು ಹೊಳಹುಗಳನ್ನು ಹೊಳೆಸುತ್ತದೆ.