ಈ ಕಥಾಸಂಕಲನದಲ್ಲಿ ಐವತ್ತೆಂಟು ಕಥೆಗಾರರ ಕಥೆಗಳಿವೆ. ಇವರಲ್ಲಿ, ಇದಾಗಲೇ ಹೆಸರು ಮಾಡಿರುವ ಕಥೆಗಾರರು ಕೆಲವರಷ್ಟೇ. ಉಳಿದವರೆಲ್ಲಾ ಹೊಸ ಕಥೆಗಾರರು. ತಮ್ಮ ವಿನೂತನವಾದ ಕಥಾ ಹಂದರ, ನಿರೂಪಣೆಯ ಶೈಲಿ, ಭಾಷಾ ಬಳಕೆಗಳಿಂದ ತಮ್ಮದೇ ಆದ ಹೊಸ ಜಗತ್ತನ್ನು ಇಲ್ಲಿ ಅನಾವರಣ ಮಾಡಿದ್ದಾರೆ. ಆದ್ದರಿಂದಲೇ ಸಂಕಲನದ ಕಥೆಯೊಂದರ ಹೆಸರನ್ನು, ಈ ಕಥಾಸಂಕಲನಕ್ಕೂ ಅತ್ಯಂತ ಪೂರಕವಾಗಿ ಹೊಂದುತ್ತದೆಂದು ಆಯ್ಕೆ ಮಾಡಿಕೊಳ್ಳಲಾಗಿದೆ. ಹೊಸ ಕಥೆಗಾರರ ನೂತನ ಜಗತ್ತಿಗೆ ಬಾಗಿಲು ತೆರೆದಂತಿದೆ ಈ ಕಥಾ ಸಂಕಲನ.