ವಿವರ / Details

ಸುಮಾರು ಏಳನೇ ಶತಮಾನದಲ್ಲಿ ಜೀವಿಸಿದ್ದ ಆಂಡಾಳು, ಹನ್ನೆರಡು ಜನ ಆಳ್ವಾರುಗಳಲ್ಲಿ ಒಬ್ಬಳು. ಇವಳ ಇನ್ನೊಂದು ಹೆಸರು ಗೋದಾದೇವಿ. ಇವಳು ಪೆರಿಯಾಳ್ವಾರರ ಸಾಕುಮಗಳು. ಇವಳು ಶ್ರೀರಂಗನಾಥನನ್ನೇ ವಿವಾಹವಾಗಬೇಕೆಂದು ಮೊದಲೇ ಸಂಕಲ್ಪಿಸಿಕೊಂಡಿದ್ದು, ತಾನೇ ರಚಿಸಿದ ತಿರುಪ್ಪಾವೈಯನ್ನು ದಿನಕ್ಕೊಂದರಂತೆ ಭಗವಂತನಿಗಾಗಿ ಹಾಡಿ, ತನ್ನ ಸಖಿಯರೊಡನೆ ಮಾರ್ಗಶಿರ ಮಾಸದ ವ್ರತವನ್ನು ಆಚರಿಸುತ್ತಾಳೆ. ಕಡೆಗೆ ಪೆರಿಯಾಳ್ವಾರರೇ ಮುಂದೆ ನಿಂತು ಆಂಡಾಳುವಿಗೆ ಶ್ರೀರಂಗದ ಶ್ರೀರಂಗನಾಥನೊಂದಿಗೆ ವಿಜೃಂಭಣೆಯಿಂದ ಮದುವೆ ಮಾಡಿಸುತ್ತಾರೆ. ಹೂಮಾಲೆಯನ್ನು ಶ್ರೀರಂಗನಾಥನಿಗೆ ಅರ್ಪಿಸಿ, ತಾನೂ ಅವನಲ್ಲಿ ಐಕ್ಯಳಾಗಿಬಿಡುತ್ತಾಳೆ. ಇವಳ ಕುರಿತಾದ ಆಶಾ ರಘು ಅವರ ರಚನೆಯ ನೀಳ್ಗತೆಯು, ಆಂಡಾಳುವಿನ ರಚನೆಯಾದ ತಿರುಪ್ಪಾವೈ ಸಹಿತವಾಗಿ ಈ ಕೃತಿಯಲ್ಲಿದೆ.