ನೀ ರಘುರಾಮ (ಭಾವ ಗೀತೆಗಳು) 2018
ಆಶಾ ರಘು ಅವರ ರಚನೆಯ ಭಾವಗೀತೆಗಳಲ್ಲಿ ಆಯ್ದ ಕೆಲವು ಗೀತೆಗಳು ‘ನೀ ರಘುರಾಮ’ ದಾಂಪತ್ಯ ಗೀತೆಗಳ ಧ್ವನಿಸುರುಳಿಯಲ್ಲಿವೆ. ಇದರಲ್ಲಿ ‘ನೀ ರಘುರಾಮ’, ‘ಸೆರೆ ಹಿಡಿಯುವೆ ನಿನ್ನ’, ‘ಚಟಪಟ ಸಾಸಿವೆ’, ‘ಕತ್ತಲಾಗುತ್ತಿದೆ ಹಚ್ಚು ಹಣತೆ’, ‘ಬಾ ನನ್ನ ಕನಸಿನೂರಿಗೆ’, ‘ಒಂದು ಇರುಳಿನ ಬಾನಿನಲಿ’, ‘ಎಲ್ಲೋ ಇದ್ದೆ ನೀ’ ಹಾಗೂ ‘ತೂಗುಯ್ಯಾಲೆ ಬರಿ ಆಟವಲ್ಲ’ ಎಂಬ ಎಂಟು ಗೀತೆಗಳಿದ್ದು, ಇವುಗಳಿಗೆ ಶ್ರೀಮತಿ ಪ್ರೇಮಲತಾ ದಿವಾಕರ್ ಅವರು ಸಂಗೀತ ಸಂಯೋಜನೆ ಮಾಡಿ, ಎಲ್ಲ ಹಾಡುಗಳನ್ನೂ ತಾವೇ ಹಾಡಿದ್ದಾರೆ. ಲಹರಿ ಮ್ಯೂಸಿಕ್ ಸಂಸ್ಥೆ ಈ ಧ್ವನಿಸುರುಳಿಯನ್ನು ಹೊರತಂದಿದ್ದು, ಇದು ಯೂಟ್ಯೂಬಿನಲ್ಲಿ ಲಭ್ಯವಿದೆ.
Nee Raghurama (Light music songs) 2018
Selected few light music songs of Asha Raghu are contained in ‘Nee Raghurama’, the wedded life song series. In this collection there are eight songs namely ‘Nee Raghurama’, ‘katthalagutthide hacchu hanathe’, ‘ba Nanna kanasinoorige’, ‘Ondu irulina baninali’, ‘ello idde nee’ and ‘thooguyyaleyidu atavalla’. Smt. Premalatha Divakar has rendered music to this Audio collection and she herself has sung all the songs. Lahari Music has produced this Audio and it is available on YouTube.
ಬಂದಳು ಅಮ್ಮಾ (ಭಕ್ತಿಗೀತೆಗಳು ) 2020
ಆಶಾ ರಘು ಅವರು ಶ್ರೀ ಬನಶಂಕರಿ ದೇವಿಯ ಕುರಿತು ರಚಿಸಿರುವ ಭಕ್ತಿ ಗೀತೆಗಳು ಈ ‘ಬಂದಳು ಅಮ್ಮ’ ಧ್ವನಿಸುರುಳಿಯಲ್ಲಿದೆ. ಇದರಲ್ಲಿ ‘ಬನಶಂಕರಿ ಅಮ್ಮ’ , ‘ಒಮ್ಮೆ ಬನದಮ್ಮ’, ‘ದೀಪ ಹಚ್ಚುವ’, ‘ಏನ ಕೊಟ್ಟರು’, ‘ನಿನ್ನ ಆಲಯದ’, ‘ಬೆಳಗಿನ ಜಾವ’, ‘ಮಿಂದು ನಾ’, ‘ಬಂದಳು ಅಮ್ಮ’ ಮೊದಲಾದ ಗೀತೆಗಳಿವೆ. ರಾಘವೇಂದ್ರ ಬಿಜಾಡೆ, ಸುಪ್ರೀತ್ ಫಲ್ಗುಣ, ಸ್ಫೂರ್ತಿ ಸುಲುಗೋಡು, ಸಿರಿ, ಸೌಮ್ಯ ಉಪಾಧ್ಯಾಯ, ನೈನ ಆರ್ ಮೂರ್ತಿ, ಪಲ್ಲವಿ ಕೃಷ್ಣ ಮೊದಲಾದ ಗಾಯಕರು ಹಾಡಿದ್ದಾರೆ. ರಾಘವೇಂದ್ರ ಬಿಜಾಡೆಯವರು ಇದಕ್ಕೆ ಸಂಗೀತ ನಿರ್ದೇಶನ ಮಾಡಿದ್ದು, ಲಹರಿ ಮ್ಯೂಸಿಕ್ ಸಂಸ್ಥೆ ಈ ಧ್ವನಿಸುರುಳಿಯನ್ನು ಹೊರತಂದಿದೆ. ಈ ಧ್ವನಿಸುರುಳಿ ಯೂಟ್ಯೂಬಿನಲ್ಲಿ ಲಭ್ಯವಿದೆ.
Bandalu Amma (Devotional Songs) 2020
‘Bandalu Amma’ audio jukebox contains Asha Raghu’s Devotional composition on Goddess Sri Banashankari Devi. This contains the songs ‘Banashankari amma’, ‘omme banadamma’, ‘deepa hacchuva’, ‘ena kottaru’, ‘ninna alayada’, ‘belagina java’, ‘mindu naa’ and ‘bandalu amma’. Raghavendra Bijade, Supreeth Palguna, Spoorthy Sulugodu, Siri, Sowmya Upadyaya, Naina R Murthy, Pallavi Krishna and others sing these songs. Music direction is provided by Raghavendra Bijade. Lahari Music has brought out this Audio Jukebox and it is available on YouTube.
ಶರಣಾಗಿ ಬಂದಿರುವೆ ಬನಶಂಕರಿ (ಭಕ್ತಿ ಗೀತೆಗಳು) 2025
ಆಶಾ ರಘು ಅವರು ಶ್ರೀ ಬನಶಂಕರಿ ದೇವಿಯ ಕುರಿತು ರಚಿಸಿರುವ ಭಕ್ತಿ ಗೀತೆಗಳು. ಈ ‘ಶರಣಾಗಿ ಬಂದಿರುವೆ ಬನಶಂಕರಿ’ ಧ್ವನಿಸುರುಳಿಯಲ್ಲಿದೆ. ‘ದುರ್ಗೆಯು ನೀ ಚಾಮುಂಡಿ’, ‘ಶರಣಾಗಿ ಬಂದಿರುವೆ’, ‘ಅಮ್ಮ ಕರುಣಾಳು’, ‘ದಕ್ಷರಾಜನ ಮಗಳಾಗಿ’, ‘ಮುಂಜಾನೆ ಮನೆಮುಂದೆ’, ‘ಕನಸಾಯಿತು ತಂಗಿ’, ‘ಮಂಗಳ ಶುಕ್ರವಾರಗಳ’, ‘ಎತ್ತಿರೆ ಮುತ್ತಿನ ಆರತಿಯ’ ಮೊದಲಾದ ಗೀತೆಗಳಿವೆ. ಶ್ರೀಮತಿ ಪ್ರೇಮಲತಾ ದಿವಾಕರ್ ಅವರು ಈ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿ, ಸ್ವತಃ ಎಲ್ಲ ಹಾಡುಗಳನ್ನು ಹಾಡಿದ್ದಾರೆ. ಇದು ಆಶಾ ರಘು ಅವರದ್ದೇ ಆದ ಅರು ಕ್ರಿಯೇಶನ್ಸ್ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣಗೊಂಡಿದ್ದು, ಅರು ಕ್ರಿಯೇಶನ್ಸ್ ನ ಯೂಟ್ಯೂಬ್ ವಾಹಿನಿಯಲ್ಲಿ ಲಭ್ಯವಿದೆ.
Sharanagi bandiruve Banashankari (Devotional Songs) 2025
‘Sharanagi bandiruve Banashankari’ contains Asha Raghu’s Devotional composition on Goddess Sri Banashankari Devi. This contains the songs ‘Durgeyu nee Chamundi’, ‘Sharanagi bandiruve’, ‘Amma karunalu’, ‘Daksharajana magalagi’, ‘munjane manemunde’, ‘kanasayitu thangi’, ‘Mangala Shukravaragala’ and ‘Etthire mutthina arathiya’. Smt. Premalatha Divakar has rendered music to this Audio collection and she herself has sung all the songs. Asha Raghu’s production house ARU Creations has produced this Audio and it is available on YouTube.