ರಂಗಭೂಮಿ / Theatre

ಶಾಲಾಕಾಲೇಜುಗಳ ದಿನಗಳಲ್ಲಿಯೇ ನಾಟಕ ರಚನೆ, ನಿರ್ದೇಶನ ಹಾಗೂ ಅಭಿನಯವನ್ನು ಮಾಡುತ್ತಿದ್ದ ಆಶಾ ರಘು ಅವರು 2000-2001ರಲ್ಲಿ ಅಭಿನಯ ತರಂಗ ನಾಟಕ ಶಾಲೆಯಿಂದ ರಂಗಭೂಮಿಯ ಡಿಪ್ಲೊಮಾವನ್ನು ಪಡೆದರು. ‘ಬಣ್ಣದ ಕೊಡೆ’, ‘ಮೂಕಬಲಿ’, ‘ಸತ್ಯ ಪ್ರಮಾಣ’ ಮೊದಲಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಆಕಾಶವಾಣಿಯಲ್ಲಿ ‘ಬಿ’ ಗ್ರೇಡ್ ಕಲಾವಿದೆಯಾಗಿ ಹಲವು ನಾಟಕಗಳಿಗೆ ಧ್ವನಿ ನೀಡಿರುವುದಲ್ಲದೆ, ‘ಯುವರಂಜಿನಿ ಯುವಕುಶಲೋಪರಿ’ ಕಾರ್ಯಕ್ರಮದ ಹಲವು ಕಂತುಗಳ ನಿರೂಪಣೆಯನ್ನೂ ಮಾಡಿದ್ದಾರೆ. 2007ರಲ್ಲಿ ‘ನವರಸ ಕಲಾಶಾಲೆ’ ಎಂಬ ಒಂದೇ ಸೂರಿನಡಿ ಸಂಗೀತ, ನೃತ್ಯ, ಚಿತ್ರಕಲೆ, ರಂಗಭೂಮಿ, ಸಿನೆಮಾ ಮೊದಲಾದ ಕಲಾ ಪ್ರಕಾರಗಳ ತರಬೇತಿಯನ್ನು ನೀಡುವ ಕಲಾಶಾಲೆಯನ್ನು ಆರಂಭಿಸಿ, ಮೂರು ವರ್ಷಗಳ ಕಾಲ ರಂಗಭೂಮಿ ಹಾಗೂ ಸಿನೆಮಾ ವಿಭಾಗದ ವಿದ್ಯಾರ್ಥಿಗಳಿಗೆ ಬೋಧಿಸಿರುವುದಲ್ಲದೆ, ವಿದ್ಯಾರ್ಥಿಗಳಿಗಾಗಿಯೇ ಹಲವಾರು ನಾಟಕಗಳನ್ನು ರಚಿಸಿ, ನಿರ್ದೇಶಿಸಿದ್ದಾರೆ. ಆನಂತರದ ದಿನಗಳಲ್ಲಿ ಕೆಲವು ನಾಟಕ ಕೃತಿಗಳನ್ನು ಪ್ರಕಟಿಸಿದ್ದಾರೆ. ಈಚೆಗೆ ಇವರ ‘ಪೂತನಿ’ ಎಂಬ ನಾಟಕವನ್ನು ಶ್ರೀ ಸಂಪಿಗೆ ತೋಂಟದಾರ್ಯ ಅವರು ಮೂಡಲಪಾಯ ಮ್ಯಾಳಕ್ಕೆ ಅಳವಡಿಸಿದ್ದು, ಇದನ್ನು ಶ್ರೀ ಮಲ್ಲಿಕಾರ್ಜುನಸ್ವಾಮಿ ಮಹಾಮನೆಯವರು ನಿರ್ದೇಶಿಸುತ್ತಿದ್ದಾರೆ.

Asha Raghu, who has been creating, directing and acting in plays since her school days, obtained her Diploma in Theater from Abhinayatharanga during 2000-2001. She acted in dramas like ‘Bannada Kode’, ‘Mookabali’, ‘Satya Pramana’. As a ‘B’ grade artiste in Aakashvani, she has also voiced many dramas and narrated many episodes of the show ‘Yuvaranjini Yuvakushalopari’. In 2007, she started her own performing arts school called ‘Navarasa school of Arts’, which provided training in music, dance, painting, theater and cinema, and for three years she taught in the theater and cinema department and also created and directed several plays for the students. In later days, she published four drama works. Her play ‘Poothani’ is adapted to the Moodalapaya Myala form by Sri Sampige Thontandarya and Sri Mallikarjunaswamy Mahamane is directing it.

2000ದ ಇಸವಿಯಲ್ಲಿ ಅಭಿನಯ ತರಂಗ ರಂಗಶಾಲೆ ನಿರ್ಮಿಸಿದ ಶ್ರೀ ಪ್ರಮೋದ್ ಶಿಗ್ಗಾಂವ್ ಅವರ ನಿರ್ದೇಶನದ ‘ಮೂಕಬಲಿ’ ನಾಟಕದ ಸೀತಕ್ಕನ ಪಾತ್ರದಲ್ಲಿ
2000ದಲ್ಲಿ ಅಭಿನಯ ತರಂಗ ರಂಗಶಾಲೆಯ ಸಹ ವಿದ್ಯಾರ್ಥಿಗಳೊಂದಿಗೆ ಆಶಾ ರಘು.
2008ರಲ್ಲಿ ನವರಸ ಕಲಾಶಾಲೆಯ ವಾರ್ಷಿಕೋತ್ಸವದಲ್ಲಿ ಶ್ರೀ ಆರ್.ನಾಗೇಶ್, ಶ್ರೀ ಗೀತಪ್ರಿಯ, ಡಾ.ಮಂಗಳಾ ಪ್ರಿಯದರ್ಶಿನಿ ಅವರೊಂದಿಗೆ ಶಾಲಾ ಮುಖ್ಯಸ್ಥೆ ಆಶಾ ರಘು.
2008ರಲ್ಲಿ ನವರಸ ಕಲಾಶಾಲೆಯಿಂದ ನಿರ್ಮಾಣಗೊಂಡ, ಆಶಾ ರಘು ಅವರ ರಚನೆ ಮತ್ತು ನಿರ್ದೇಶನದ ಮಕ್ಕಳ ನಾಟಕ ‘ಬಂಗಾರದ ಪಂಜರ’ ದ ಮೊದಲ ಪ್ರದರ್ಶನದ ಸಂದರ್ಭ.
2009ರಲ್ಲಿ ನವರಸ ಕಲಾಶಾಲೆಯ ರಂಗಭೂಮಿ ಮತ್ತು ಸಿನೆಮಾ ತರಗತಿಯ ವಿದ್ಯಾರ್ಥಿಗಳೊಂದಿಗೆ ಶ್ರೀಮತಿ ಆಶಾ ರಘು
2008ರಲ್ಲಿ ನವರಸ ಕಲಾಶಾಲೆಯ ರಂಗ ನಿರ್ದೇಶಕಿಯಾಗಿ ಶ್ರೀಮತಿ ಆಶಾ ರಘು.