ಆಶಾ ರಘು ಅವರು ಹಲವಾರು ಕಿರುತೆರೆ ಧಾರಾವಾಹಿಗಳಿಗೆ ಕಥೆ, ಸಂಭಾಷಣೆಗಳನ್ನು ರಚಿಸಿದ್ದಾರೆ. ಟಿ.ಎನ್.ಸೀತಾರಾಮ್ ಅವರ ‘ಮುಕ್ತಮುಕ್ತ’, ‘ಮೋಹಿನಿ ವರ್ಸಸ್ ಮಾಲಿಂಗು’, ನಾಗತಿಹಳ್ಳಿ ಚಂದ್ರಶೇಖರ್ ಅವರ ‘ಅಪಾರ್ಟ್ಮೆಂಟ್’, ಎಂ.ಎನ್.ಜಯಂತ್ ಅವರ ‘ಮಳೆಬಿಲ್ಲು’ ಹಾಗೂ ಬಿ.ಸುರೇಶ್ ಅವರ ‘ಪ್ರೀತಿ ಪ್ರೇಮ’ ಧಾರಾವಾಹಿಗಳಿಗೆ ಕಥಾವಿಸ್ತರಣೆಯಲ್ಲಿ ನೆರವು ನೀಡಿ, ಕೆಲವಾರು ಕಂತುಗಳಿಗೆ ಸಂಭಾಷಣೆಯನ್ನು ಬರೆದಿದ್ದಾರೆ. ‘ಈ ಟಿ.ವಿ’ಯ ‘ಯುವಫಂಡಾ’ ಕಾರ್ಯಕ್ರಮದ ಹಲವು ಕಂತುಗಳಿಗೆ ನಿರೂಪಣಾ ಸಾಹಿತ್ಯವನ್ನು ರಚಿಸಿದ್ದಾರೆ. ಸಿಹಿಕಹಿ ಚಂದ್ರು ಅವರ ‘ಪಾಪ ಪಾಂಡು’, ಸಕ್ರೇಬೈಲು ಶ್ರೀನಿವಾಸ್ ಅವರ ‘ಬಿದಿಗೆ ಚಂದ್ರಮ’ ಧಾರವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.
ನಾಗತಿಹಳ್ಳಿ ಚಂದ್ರಶೇಖರ್ ಅವರ ‘ಅಮೃತಧಾರೆ’ ಚಿತ್ರಕ್ಕೆ ಸಹಾಯಕ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ ಹಾಗೂ ‘ಮಾತಾಡ್ ಮಾತಾಡು ಮಲ್ಲಿಗೆ’ ಚಿತ್ರದ ಕಥಾ ವಿಸ್ತರಣೆಯಲ್ಲಿ ನೆರವು ನೀಡಿದ್ದಾರೆ. ಆಶಾ ರಘು ಅವರ ‘ಚಿತ್ತರಂಗ’ ಕಾದಂಬರಿಯು 70-80ರ ದಶಕದ ಕನ್ನಡ ಚಿತ್ರರಂಗದ ವಾತಾವರಣವನ್ನು ಉಳ್ಳ, ಚಿತ್ರರಂಗದ ಕಾಲ್ಪನಿಕ ವ್ಯಕ್ತಿಗಳ ಮನೋರಂಗದ ಚಿತ್ರಣವನ್ನು ಕಟ್ಟಿಕೊಡುವ ಪ್ರಯತ್ನವಾಗಿದ್ದು, ಇದನ್ನು ಕೂಡಾ ಈ ಸಂದರ್ಭದಲ್ಲಿ ಉಲ್ಲೇಖಿಸಬಹುದಾಗಿದೆ.

Asha Raghu has written story and screenplay for several TV serials. Assisted in story development and wrote dialogues for some episodes of T.N.Seetharam’s ‘Muktamukta’, ‘Mohini vs Malingu’, Nagatihalli Chandrashekhar’s ‘Apartment’, M.N.Jayanth’s ‘Malebillu’ and B.Suresh’s ‘Preethi Prema’. She has composed the narration for several episodes of ‘Yuvafanda’ on Ee TV. She acted in supporting roles in Sihikahi Chandru’s ‘Papa Pandu’, Sakrebailu Srinivas’s ‘Bidige Chandrama’.
She worked as an assistant director for Nagatihalli Chandrashekhar’s film ‘Amrithadhare’ and assisted in the story development of ‘Matad Matadu Mallige’. Her novel ‘Chittaranga’ is an attempt to create an image portraying fictional characters of 70s-80s Kannada cinema industry, which can also be mentioned here.