
’ಆರನೇ ಬೆರಳು’ ಕಥಾಸ0ಕಲನದಲ್ಲಿಯ ಮೊದಲ ಕಥೆ, “ಆರನೇ ಬೆರಳು” ಕಥೆಯ ಆಯಾಮ ವಿಸ್ತಾರವಾಗಿದ್ದು ಕಾದ0ಬರಿಗೆ ಬೇಕಾದ ವಿಪುಲ ಸಾಮಗ್ರಿಯನ್ನು ಒದಗಿಸುತ್ತದೆ. “ಅಗ್ನಿದಿವ್ಯ” ಕಥೆಯ ನಾಯಕಿ ರಾಮಾಯಣದ ಸೀತೆ. ಅವಳ ಆದರ್ಶ, ಪತಿಭಕ್ತಿ, ಮಹಾಪಾತಿವ್ರತ್ಯವನ್ನು ಓದಿ ಒಪ್ಪಿ ಸವಿದ ಮನಸ್ಸು ಆಧುನಿಕ ಸೀತೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎನಿಸಿದರೂ ಸೀತೆ ಹೀಗೂ ಯೋಚಿಸರಬಹುದೆ ಎನ್ನುವ ಅನುಮಾನ ಓದುಗನಿಗೆ ಬರುವ0ತೆ ಲೇಖಕಿ ಕುಶಲತೆಯಿ0ದ ಕಥೆಯನ್ನು ಹೆಣೆದಿರುವುದನ್ನು ನೋಡಬಹುದು. ‘ಪುಷ್ಪಗ0ಧಿ’ ರಾಜರಿಗೆ ಸ0ಬಂಧಿಸಿದ ಕಥೆ. ಇದು ಲೇಖಕಿಯ ಕಲ್ಪನೆಯ ಕೂಸು. ‘ಕಮರಿದ ಕನಸು’ ಮತ್ತು ‘ಪ್ರವಾಹ.. ಪ್ರಳಯ… ಪಾರ್ವತಿ’ ಗಳಲ್ಲಿ ಪುರಾಣದ ಕಥೆಗಳನ್ನು ರೂಪಾ0ತರಗೊಳಿಸಿದ್ದಾರೆ ಲೇಖಕಿ. ಗ0ಗೆಯ ’ನೀನು ನಕ್ಕರೆ ಮಳೆಗರೆಯುತ್ತದೆ, ರೈತರ ಹೊಲಗದ್ದೆಗಳಲ್ಲಿ ಫಸಲು ಬರುತ್ತೆ, ನೀನು ಅತ್ತರೆ ಪ್ರವಾಹವಾಗುತ್ತದೆ ಅ0ತ ಅಜ್ಜಿ ಹೇಳುತ್ತಿದ್ದರು’ ಎಂಬ ಮಾತು ಸಾ0ಕೇತಿಕ ಅರ್ಥವನ್ನು ಕೊಡುವಲ್ಲಿ ಸಾರ್ಥಕ್ಯವನ್ನು ಪಡೆದಿದೆ, ಕತೆ ಸೊಗಸಾಗಿ ಪಡಿಮೂಡಿದೆ.
ಪ್ರೇಮಾ ಭಟ್