ಕ್ಷಮಾದಾನ ಪ್ರತಿಕ್ರಿಯೆ /Feedback

ಬೇರೆ ದೇಶ ಭಾಷೆಗಳು ನಮ್ಮಲ್ಲಿ ಬೀಗತನಗೊಂಡ ಪರಿಣಾಮ, ನಾಟಕದಲ್ಲಿ ಹೊಸ ಆಯಾಮಗಳು ದೇಶೀಕರಣಗೊಂಡಿತು. ಅಲ್ಲದೇ ಪದ್ಯ ಆಶಯದ ಮೂಲವಾದರೆ, ಗದೈ ಕಥನವಾಯಿತು. ಆಶಾರಘು ಅವರ “ಕ್ಷಮಾಧಾನ” ನಾಟಕ ಈ ರೂಪಕ್ಕೆ ಅನ್ವರ್ಥ ಆಗಿದೆ. ಈ ನಾಟಕದಲ್ಲಿ ಬರುವ ಈ ಚೌಪದಿಯನ್ನು ನೋಡಿ:
ಯಾರೋ ಎಸಗಿದ ಪಾಪ
ಇನ್ಯರಿಗೋ ಅದರ ತಾಪ
ಕಚ್ಚಲು ಒಂದಿರುವೆ ನೋಡು
ಬೆಂಕಿಗೆ ಬಿತ್ತು ಇಡಿಯ ಗೂಡು
ಇದು ನಾಟಕದ ಒಟ್ಟಾರೆ ಆಶಯವನ್ನು ಪ್ರೇಕ್ಷಕನಲ್ಲಿ ವಿಚಾರಭಾವಕ್ಕೆ (ಅಂದರೆ ಸುಖ, ದುಃಖ, ಸಮರಸ, ಅಸಂಗತತೆಯ ಭಾವಗಳ) ದಾರಿಮಾಡಿ ಕೊಟ್ಟಿದೆ. ಹಾಗೇ ಲೇಖಕಿಯು ಈ ಮೌಕಿಕ ಮಾಧ್ಯಮಕ್ಕೆ ಲಿಖಿತದ ಲಾಲಿತ್ಯವನ್ನು ನೀಡಿ, ಈ ಕಿರು ನಾಟಕ ಕೃತಿಯಿಂದ, ಮೇರು ಪರಿಣಾಮಕ್ಕೆ ದಾರಿ ಮಾಡಿದ್ದಾರೆ.
ಶ್ರೀಪತಿ ಮಂಜನಬೈಲು