ವಿವರ / Details

ಗತ
ಪುನರ್ಜನ್ಮದ ರೋಚಕ ಕಾದಂಬರಿ

‘ಗತ’ ಆಶಾ ರಘು ಅವರ ಎರಡನೆಯ ಕಾದಂಬರಿ. ‘ಮನುಷ್ಯ ಮರಣ ಹೊಂದಿದ ಮೇಲೆ ಪುನಃ ಈ ಭೂಮಿಯ ಮೇಲೆ ಹುಟ್ಟಿ ಬರುತ್ತಾನೆ… ಹುಟ್ಟು ಆರಂಭವೂ ಅಲ್ಲ, ಸಾವು ಅಂತ್ಯವೂ ಅಲ್ಲ…’ ಎಂದು ಭಾರತೀಯ ವೇದಾಂತವೂ, ಇತರ ಕೆಲವು ಧರ್ಮಗಳೂ ಹೇಳುತ್ತವೆ. ಈ ನಂಬಿಕೆಯ ಬೆನ್ನಿಗೆ ಬೀಳದಿದ್ದರೂ ಪುನರ್ಜನ್ಮದ ವಿಷಯ ಯಾವತ್ತಿಗೂ ಅತ್ಯಂತ ಕುತೂಹಲಕಾರಿಯಾದುದು. ಅಂತಹುದೇ ರೋಚಕವೂ, ಕುತೂಹಲಕಾರಿಯೂ ಆದ ಕಥಾವಸ್ತು ಈ ಕಾದಂಬರಿಯದ್ದು.