ವಸ್ತು/Subject

ಇದೊಂದು ಕಿರು ಸಾಮಾಜಿಕ ನಾಟಕ. ಈ ನಾಟಕವನ್ನು ಹದಿನಾಲ್ಕು ವರ್ಷ ವಯಸ್ಸಿನ ಹುಡುಗಿಯ ಅತ್ಯಾಚಾರ ಹಾಗು ಕೊಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 14, 2004 ರಂದು ಗಲ್ಲಿಗೇರಲ್ಪಟ್ಟ ಕಲ್ಕತ್ತದ ಧನಂಜಯ್ ಚಟರ್ಜಿಯ ಪ್ರಕರಣದ ಹಿನ್ನೆಲೆಯಲ್ಲಿ ರಚಿಸಲಾಗಿದೆ. ಧನಂಜಯ್ ಪ್ರಕರಣವನ್ನು ಆಧಾರವಾಗಿ ಇಟ್ಟುಕೊಳ್ಳಲಾಗಿದೆಯೇ ವಿನಃ ಉಳಿದಂತೆ ಇಲ್ಲಿನ ಯಾವ ಪಾತ್ರಗಳೂ ಜೀವಂತವಲ್ಲ. ವಾಸ್ತವದ ಸಂಗತಿಯೊಂದರ ಹಿನ್ನೆಲೆಯಲ್ಲಿ ಕಲ್ಪನೆಯ ಆಸರೆಯೊಂದಿಗೆ ರಚಿಸಲಾಗಿರುವ ನಾಟಕವಿದು.